ಶಬ್ದದ ಪ್ರಸಾರ

ಶಬ ವು ವಸ್ತುಗಳ ಕಂಪನದಿಂದ ಉಂಟಾಗುತ್ತದೆ, ಯಾವ ವಸ್ತು ಅಥವಾ ಪದಾರ್ಥದ ಮೂಲಕ ಶಬ್ದವು !
ಪ್ರಸಾರವಾಗುತ್ತದೆಯೋ ಅದನ್ನು ಮಾಧ್ಯಮ ಎನ್ನುವರು, ಅದು ಘನ, ದ್ರವ ಅಥವಾ ಅನಿಲವಾಗಿರಬಹುದು.
ಶಬವು ಆಕರ ಬಿಂದುವಿನಿಂದ ಕೇಳುಗನವರೆಗೆ ಮಾಧ್ಯಮದ ಮೂಲಕ ಪ್ರಸಾರವಾಗುತ್ತದೆ. ವಸ್ತುವು
ಕಂಪಿಸಿದಾಗ ಅದು ತನ್ನ ಸುತ್ತಲಿನ ಮಾಧ್ಯಮದ ಕಣಗಳನ್ನು ಕಂಪಿಸುವಂತೆ ಮಾಡುತ್ತದೆ. ಕಣಗಳು ಆಕರದಿಂದ
ಕಿವಿಯವರೆಗೆ ಚಲಿಸುವುದಿಲ್ಲ. ಕಂಪಿಸುವ ವಸ್ತುವಿನೊಂದಿಗೆ ಸಂಪರ್ಕವಾಗಿರುವ ಮಾಧ್ಯಮದ ಕಣವು ತನ್ನ
ಸಮತೋಲನ ಸ್ಥಿತಿಯಿಂದ ಸ್ಥಾನಪಲ್ಲಟ ಗೊಳ್ಳುತ್ತದೆ. ನಂತರ ಅದು ತನ್ನ ಪಕ್ಕದ ಕಣದ ಮೇಲೆ ಬಲವನ್ನು
ಹಾಕುತ್ತದೆ. ಇದರಿಂದ ಪಕ್ಕದ ಕಣವು ತನ್ನ ನಿಶ್ಚಲ ಸ್ಥಿತಿಯಿಂದ ಸ್ಥಾನಪಲ್ಲಟ ಗೊಳ್ಳುತ್ತದೆ. ಪಕ್ಕದ ಕಣವನ್ನು
ಸ್ಥಾನಪಲ್ಲಟ ಗೊಳಿಸಿದ ನಂತರ ಮೊದಲ ಕಣವು ತನ್ನ ಮೂಲ ಸ್ಥಾನಕ್ಕೆ ಹಿಂದಿರುಗುತ್ತದೆ. ಈ ಪ್ರಕ್ರಿಯೆಯೂ
ಹೀಗೆ ಮುಂದುವರೆಯುತ್ತೆ ಶಬ್ದವು ನಿಮ್ಮ ಕಿವಿಯನ್ನು ತಲುಪುತ್ತದೆ. ಮಾಧ್ಯಮದಲ್ಲಿ ಶಬ್ದದ ಆಕರದಿಂದ
ಉಂಟಾದ ಕ್ಷೋಭೆ (disturbance)ಯು ಮಾದ್ಯಮದಲ್ಲಿ ಚಲಿಸುತ್ತದೆ. ಆದರೆ ಮಾಧ್ಯಮದ ಕಣಗಳನ್ನು
ಚಲಿಸುವಂತೆ ಮಾಡುವುದಿಲ್ಲ.

ಮಾಧ್ಯಮದ ಕಣಗಳ ಪಕ್ಕದ ಕಣಗಳನ್ನು ಚಲಿಸುವಂತೆ ಮಾಡಿದಾಗ, ಮಾಧ್ಯಮದಲ್ಲಿ ಉಂಟಾದ
ಕೋಭೆಗೆ ತರಂಗ ಎನ್ನುವರು. ಪ್ರತಿಯಾಗಿ ಅವು ಇದೇ ರೀತಿಯ ಚಲನೆಯನ್ನುಂಟು ಮಾಡುತ್ತವೆ. ಮಾಧ್ಯಮದ
ಕಣಗಳು ತಾವಾಗಿಯೇ ಮುಂದಕ್ಕೆ ಚಲಿಸುವುದಿಲ್ಲ. ಅದರೆ ಕೋಭೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.
ಈ ರೀತಿಯ ಶಬ್ದ ವು ಮಾಧ್ಯಮದಲ್ಲಿ ಪ್ರಸಾರ ವಾಗುವುದರಿಂದ ಅದನ್ನು ಒಂದು ತರಂಗ ರೂಪ ಎನ್ನಲಾಗಿದೆ;
ಮಾಧ್ಯಮದಲ್ಲಿ ಕಣಗಳ ಚಲನೆಯಿಂದ ಶಬ್ದದ ತರಂಗಗಳು ಗುಣಲಕ್ಷಣಗಳು ತಿಳಿಯುತ್ತದೆ ಮತ್ತು ಇವುಗಳನ್ನು
ಯಾಂತ್ರಿಕ ತರಂಗ ಗಳೆಂದು ಕರೆಯುತ್ತಾರೆ.

ಶಬ್ದ ಪ್ರಸಾರಕ್ಕೆ ಗಾಳಿಯು ಒಂದು ಸಾಮಾನ್ಯ ಮಾಧ್ಯಮವಾಗಿದೆ. ಕಂಪಿಸುವ ವಸ್ತುವಿನ ಮಲ್ಲ
ಚಲಿಸಿದಾಗ ಅದು ಗಾಳಿಯನ್ನು ತಳ್ಳಿ, ಸಂಪೀಡಿಸಿ ಅದರ ಮುಂದೆ ಹೆಚ್ಚು ಒತ್ತಡವಿರುವ ಭಾಗವನ್ನು
ಮಾಡುತ್ತದೆ. ಈ ಭಾಗವನ್ನು ಸಂಪೀಡನ (compression, C) ಎನ್ನುತ್ತೇವೆ (ಚಿತ್ರ 12.5), ಈ ಸಂಪೀಡನೆಯ
ಕಂಪಿಸುವ ವಸ್ತುವಿನಿಂದ ದೂರ ಚಲಿಸುತ್ತದೆ, ಕಂಪಿಸುವ ವಸ್ತುವು ಹಿಂದಕ್ಕೆ ಚಲಿಸಿ ದಾಗ, ಅದು ಚಿತ್ರ 12.5

ರಾಯತ
ರಲ್ಲಿ ತೋರಿಸಿರುವಂತೆ ಕಡಿಮೆ ಒತ್ತಡವಿರುವ ಎರಳು (rarefaction. R) ವಲಯವನ್ನುಂಟು ಮಾಡುತ್ತದೆ,
ಆಕೆಗಳಿ- ಕಂಪಿಸುವ ವಸ್ತುವು ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿದಾಗ ಗಾಳಿಯಲ್ಲಿ ಸಂಪೀಡನ ಮತ್ತು

ಬಿಗಿ

ಎರಳನಗಳ ಸರಣಿಯು ಏರ್ಪಡುತ್ತದೆ. ಇದು ಶಬ್ದದ ತರಂಗವನ್ನು ಮಾಧ್ಯಮದಲ್ಲಿ ಪ್ರಸಾರವಾಗುವಂತೆ
ಮಾಡುತ್ತದೆ, ಸಂಪೀಡನವು ಹೆಚ್ಚಿನ ಒತ್ತಡವಿರುವ ಪ್ರದೇಶ ಮತ್ತು ಎರಳನವು ಕಡಿಮೆ ಒತ್ತಡವಿರುವ
ಪ್ರದೇಶ ವಾಗಿರುತ್ತದೆ,

One comment

  1. ತುಂಬಾ ಚೆನ್ನಾಗಿ ಡೈಸ್ಪ್ಲೇ ಆಗಿದೆ.

Leave a Reply